| ಜಿ.ಪಿ.ರಾಜರತ್ನಂ | |
|---|---|
| ಜನನ | 5 ಡಿಸೇಂಬರ್ 1909 closepete (Ramanagara) , Ramanagara, Karnataka, India |
| ಮರಣ | 1979 (aged 70) |
| ಕಾವ್ಯನಾಮ | Bhramara |
| ವೃತ್ತಿ | ಕತೆಗಾರ, ಗೀತರಚನೆ, ಬರಹಗಾರ, ಕವಿ, ನುಡಿಮಾರ್ಪುಗಾರ, ಸಂಪಾದಕ |
| ಭಾಷೆ | ಕನ್ನಡ, ಪಾಲಿ, ಪ್ರಾಕೃತ, ಇಂಗ್ಲಿಷ್ |
| ರಾಷ್ಟ್ರೀಯತೆ | Indian |
| ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | Master of Arts |
| ಪ್ರಕಾರ/ಶೈಲಿ | Children's literature, Biographycriticism, interpretation, fiction, prayers and devotions, poetry |
| ಪ್ರಮುಖ ಕೆಲಸ(ಗಳು) | ರತ್ನನ ಪದಗಳು, ನಾಗನ ಪದಗಳು |
| ಬಾಳ ಸಂಗಾತಿ | ಲಲಿತಮ್ಮ, ಸೀತಮ್ಮ |
| ಸಂಬಂಧಿಗಳು | Sridhar (son)Shaila Sridhar Rajarathnam (daughter-in-law)Srimathi Sampathkumar (daughter) and Srilata Vijayakumar (daughter)[೧] |
'ಜಿ. ಪಿ. ರಾಜರತ್ನಂ'(೧೯೦೯-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ "ನಾಗಪಟ್ಟಣ"ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೯ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್.. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶುಗೀತೆ ಸಂಕಲನ '. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.
ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು.
"ಭ್ರಮರ" ಎಂಬುದು ಇವರ ಕಾವ್ಯನಾಮವಾಗಿತ್ತು.
ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. [೬೨]
ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು.
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!
ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!
--@--
ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ
---. ---